News diary kannada

News diary kannada

Share

Contact information, map and directions, contact form, opening hours, services, ratings, photos, videos and announcements from News diary kannada, Rajshahi Division.

29/08/2026

ಹಸಿರು ಸೀರೆಯಲ್ಲಿ ಚಿಕ್ಕಣ್ಣ ಹುಡುಗಿ, ಹೂವಿನ ಹಾರ ಹಾಕಿ ಕೂತ ಪಾವನ!

29/08/2026

ಮದ್ವೆ ಶಾಸ್ತ್ರ ಮಾಡೋದನ್ನೇ ನೋಡುತ್ತ ನಿಂತ ನಟ ಚಿಕ್ಕಣ್ಣ

29/08/2026

ಶಿವಣ್ಣಗೆ ಚಿನ್ನದ ರಾಖಿ ಕಟ್ಟಿದ್ದ ರಾಧಿಕಾ ಕುಮಾರಸ್ವಾಮಿ

ಶಿವರಾಜ್​ ಕುಮಾರ್​ ಮತ್ತು ರಾಧಿಕಾ ಕುಮಾರಸ್ವಾಮಿ ಕನ್ನಡದ ಐಕಾನಿಕ್ ಅಣ್ಣ-ತಂಗಿ ಜೋಡಿಯಾಗಿದ್ದು, 'ತವರಿಗೆ ಬಾ ತಂಗಿ'ಯಂತಹ ಹಿಟ್ ಚಿತ್ರಗಳಿಂದ ಇವರು ಚಿರಪರಿಚಿತರು. ರಕ್ಷಾ ಬಂಧನದಂದು ರಾಧಿಕಾ ಅವರು ಶಿವಣ್ಣನಿಗೆ ಚಿನ್ನದ ರಾಖಿ ಕಟ್ಟುವ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅವರ ತೆರೆಯ ಮೇಲಿನ ಬಾಂಧವ್ಯವನ್ನು ಮತ್ತೆ ನೆನಪಿಸುತ್ತದೆ. ರಕ್ಷಾ ಬಂಧನದ ಈ ಹೊತ್ತಿನಲ್ಲಿ ಮತ್ತೆ ಇವರಿಬ್ಬರ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅದು ರಾಧಿಕಾ ಅವರು ಶಿವರಾಜ್​ ಕುಮಾರ್​ ಅವರಿಗೆ ಚಿನ್ನದ ರಾಖಿಯನ್ನು ಕಟ್ಟಿದ್ದ ಸಂದರ್ಭ. ಇದು ಕೆಲ ವರ್ಷಗಳ ಹಿಂದಿನ ವಿಡಿಯೋ. ಆದರೆ ಪ್ರತಿ ಬಾರಿ ರಕ್ಷಾ ಬಂಧನದ ಸಮಯದಲ್ಲಿ ಜಾಲತಾಣಗಳಲ್ಲಿ ಇದೇ ವರ್ಷದ್ದು ಎನ್ನುವ ರೀತಿಯಲ್ಲಿ, ಈ ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ

# actress # radika # shivanna # gold

29/08/2026

ಹೆಂಡ್ತಿಯ 10 ಲಕ್ಷ ಹಣ ತಗೊಂಡು ಮತ್ತೊಬ್ಬಳ ಜತೆ ಗಂಡ ಪರಾರಿ?

ವ್ಯಾಪಾರಕ್ಕಾಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ದಂಪತಿಯ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದೆ ಎನ್ನಲಾಗಿದೆ. ಪತಿ ತನ್ನ ಪಾಸ್‌ಪೋರ್ಟ್, ಪತ್ನಿಯ ಪಾಸ್‌ಪೋರ್ಟ್ ಹಾಗೂ ಸುಮಾರು ₹10 ಲಕ್ಷ ಹಣವನ್ನು ತೆಗೆದುಕೊಂಡು ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಪತಿ ಪರಾರಿಯಾದ ಬಳಿಕ ವಿದೇಶದಲ್ಲಿ ಸಿಲುಕಿರುವ ಪತ್ನಿ ಜಲಕನ್ಯಾ, ತವರಿಗೆ ಮರಳಲಾಗದೆ ಹಾಗೂ ಸೆನೆಗಲ್‌ನಲ್ಲೂ ಉಳಿಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಗಳಾದ ಗುರುದತ್ ಹಾಗೂ ಜಲಕನ್ಯಾ ದಂಪತಿ ಸುಮಾರು 8 ವರ್ಷಗಳ ಹಿಂದೆ ವಿವಾಹವಾಗಿದ್ದರು ಎನ್ನಲಾಗಿದೆ. ಕಳೆದ 4-5 ವರ್ಷಗಳಿಂದ ಇಬ್ಬರೂ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಗಿಡಮೂಲಿಕೆ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರದ ಉದ್ದೇಶದಿಂದಲೇ ದಂಪತಿ ವಿದೇಶಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಮತ್ತೊಬ್ಬ ಮಹಿಳೆಯೊಂದಿಗೆ ಪತಿ ಪರಾರಿ?

ತನ್ನ ಪತಿ ಗುರುದತ್ ಸೆನೆಗಲ್‌ಗೆ ಮತ್ತೊಬ್ಬ ಮಹಿಳೆಯೊಂದಿಗೆ ತೆರಳಿದ್ದು, ಆಕೆಯನ್ನು ವಿವಾಹವಾಗುವುದಾಗಿ ಹೇಳಿಕೊಂಡಿದ್ದಾನೆ ಎಂದು ಜಲಕನ್ಯಾ ಆರೋಪಿಸಿದ್ದಾರೆ. ಇದಾದ ಬಳಿಕ ಪತಿ ತನ್ನ ಬಳಿಯಿದ್ದ ಸುಮಾರು ₹10 ಲಕ್ಷ ಹಣ, ತನ್ನ ಪಾಸ್‌ಪೋರ್ಟ್ ಹಾಗೂ ಪತ್ನಿಯ ಪಾಸ್‌ಪೋರ್ಟ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
# shivamogga # Africa

29/08/2026

ಟ್ಯಾಕ್ಸಿ ಡ್ರೈವರ್‌ನ ಪ್ರೀತಿಗಾಗಿ ವಿದೇಶದಿಂದ ಬಂದ ಯುವತಿ!

ಪ್ರವಾಸಿಯಾಗಿ ಭಾರತಕ್ಕೆ ಬಂದ ಆಸ್ಟ್ರೇಲಿಯಾದ ಲೊರೆನಾ ಸ್ಟೆಫನಿ, ಮಧುರೈನಲ್ಲಿ ನಡೆದ 3 ಗಂಟೆಯ ಟ್ಯಾಕ್ಸಿ ಪ್ರಯಾಣ ಜೀವನದ ದಿಕ್ಕನ್ನೇ ಬದಲಿಸಿದೆ. ಟ್ಯಾಕ್ಸಿ ಚಾಲಕ ರಬೀಕ್ ಜೊತೆ ಆರಂಭವಾದ ಆಕಸ್ಮಿಕ ಪರಿಚಯ ಬಳಿಕ ಪ್ರೀತಿಯಾಗಿ, ಕೊನೆಗೆ ದಾಂಪತ್ಯ ಜೀವನಕ್ಕೆ ತಿರುಗಿದೆ. ಎರಡು ವರ್ಷಗಳ ಹಿಂದೆ ಲೊರೆನಾ ಸ್ಟೆಫನಿ ಪ್ರವಾಸಿಗೆಯಾಗಿ ಮಧುರೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಮಿಳುನಾಡಿನ ರಸ್ತೆಗಳ ಮೂಲಕ ಅವರನ್ನು ಕರೆದೊಯ್ಯಲು ಒಂದು ಟ್ಯಾಕ್ಸಿ ಸಿದ್ಧವಾಗಿತ್ತು. ಆ ಟ್ಯಾಕ್ಸಿ ಚಾಲಕನ ಹೆಸರು ರಬೀಕ್. ಮೂರು ಗಂಟೆಗಳ ಆ ಪ್ರಯಾಣವೇ ಮುಂದೆ ಅವರ ಜೀವನವನ್ನೇ ಬದಲಿಸುವ ಪ್ರೇಮಕಥೆಯ ಆರಂಭವಾಗುತ್ತದೆ ಎಂದು ಆಗ ಲೊರೆನಾಗೆ ತಿಳಿದಿರಲಿಲ್ಲ.

ಲೊರೆನಾ ಹೇಳುವಂತೆ, ನಾವು ಮೊದಲ ಭೇಟಿಯಲ್ಲೇ ತುಂಬಾ ಹೊಂದಿಕೊಂಡೆವು. ಯಾವುದೇ ದೊಡ್ಡ ಪ್ರೇಮ ಪ್ರಸ್ತಾಪವಿಲ್ಲದೇ, ಯಾವುದೇ ಸಿನಿಮಿಯ ಸನ್ನಿವೇಶವಿಲ್ಲದೇ, ಕೇವಲ ಒಂದು ಟ್ಯಾಕ್ಸಿ ಪ್ರಯಾಣದಿಂದ ಪ್ರೇಮಕಥೆ ಆರಂಭವಾಯಿತು. ಇಬ್ಬರೂ ಭಾರತದ Special Marriage Act ಅಡಿಯಲ್ಲಿ ವಿವಾಹ ಪ್ರಕ್ರಿಯೆ ಪೂರ್ಣಗೊಳಿಸಿ ಕಾನೂನುಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
# Driver # madurai # love # foreign # ಆಸ್ಟ್ರೇಲಿಯಾ

29/08/2026

ರಾತ್ರೋ ರಾತ್ರಿ ಕೆಲಸ ಮುಗಿಸಿ, ನನಗೇನು ಗೊತ್ತೇ ಇಲ್ಲ ಎಂದ!

ರಾತ್ರೋರಾತ್ರಿ ಪ **ತ್ನಿ ಕೊ ಮಾಡಿ, ಆಕೆಗೆ ಹೃ **ಘಾತವಾಗಿದೆ ಎಂದು ಕುಟುಂಬಸ್ಥರನ್ನು ನಂಬಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಬಳಿ ಘಟನೆ ನಡೆದಿದ್ದು, ಸದ್ಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಬಳಿಕ ಆರೋಪಿ ಗಣಪತಿ ನಾಯ್ಕ ಎಂಬಾತನನ್ನು ಬಂ **ಧಿಸಲಾಗಿದೆ.
# honavara # husband # wife

29/08/2026

‘ನಂದಗೋಕುಲ’ ಧಾರಾವಾಹಿಗೆ ವಿದಾಯ ಹೇಳಿದ ಕೇಶವ.. ಕಾರಣ ಏನ್‌ ಗೊತ್ತಾ?

ಕಲರ್ಸ್ ಕನ್ನಡದ ‘ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೀರಿಯಲ್‌ನಿಂದ ಹೊರಬಂದಿದ್ದಾರೆ. 350 ಸಂಚಿಕೆಗಳ ಪಯಣ ಮುಗಿಸಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು 'ಸಮುದ್ರ ಮಂಥನ' ಸಿನಿಮಾ ಮೂಲಕ ಬೆಳ್ಳಿಪರದೆಗೆ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಪವನ್ ಕುಮಾರ್ ಹೊಸ ಕೇಶವನಾಗಿ ಎಂಟ್ರಿ ನೀಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯಲ್ಲಿ ‘ಕೇಶವ’ ಎಂಬ ಮುಖ್ಯ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ಯಶ್ವಂತ್ ಕುಮಾರ್ ಎಸ್‌ಎಸ್ ಅವರು ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಧಾರಾವಾಹಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೇಶವ ಪಾತ್ರವೂ ಸಕತ್ ಗಮನ ಸೆಳೆಯುತ್ತಿದ್ದ ಸಂದರ್ಭದಲ್ಲೇ ನಟ ಯಶ್ವಂತ್ ಅವರು ಸೀರಿಯಲ್‌ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ತುಸು ಬೇಸರ ತಂದಿದೆ. ಇನ್ನು ಈ ಜಾಗಕ್ಕೆ ಯಾರು ಎಂಟ್ರಿ ನೀಡುತ್ತಿದ್ದಾರೆ ಎಂಬ ಕುತೂಹಲ ಮೂಡಿದೆ. ಹೊಸ ಸ್ಪರ್ಧಿಗೂ ಇಷ್ಟೇ ಪ್ರೀತಿ ಸಿಗಲಿ ಎಂದು ಧಾರಾವಾಹಿತಂಡದವರು ನಿರೀಕ್ಷಿಸುತ್ತಿದ್ದಾರೆ. ಈ ಪಾತ್ರವನ್ನು ಹೇಗೆ ಸ್ವೀಕರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
# actor # seriyal # keshava # nandagokula # Yashwanth Kumar # film

29/08/2026

ಈಕೆಯ ಸಿನಿಮಾ ಇಷ್ಟ ಆಗದಿದ್ರೆ ರಸ್ತೆಯಲ್ಲಿ ಆ ಕೆಲಸ ಮಾಡ್ತಾಳಂತೆ ಈ ನಟಿ!

‘ಸಹಾ’ ಸಿನಿಮಾ ತಂಡದ ಸದಸ್ಯರು ಚಿತ್ರದ ಬಗ್ಗೆ ದೊಡ್ಡ ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಮಧ್ಯೆ ನಾಯಕಿ ಶ್ವೇತಾ ಲಕ್ಷ್ಮಣ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಈ ಸಿನಿಮಾ ಯಾರಿಗೂ ನಿರಾಸೆ ಮಾಡುವುದಿಲ್ಲ. ಚಿತ್ರತಂಡದ ಈ ಅತಿಯಾದ ಆತ್ಮವಿಶ್ವಾಸ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರೇಕ್ಷಕರಲ್ಲಿ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ.

ಸಿನಿಮಾ ನೋಡಿದ ನಂತರ ಯಾರಿಗಾದರೂ ನಿರಾಸೆಯಾದರೆ ಹೈದರಾಬಾದ್‌ನ ಅಮೀರ್‌ಪೇಟೆಯ ಮುಖ್ಯ ರಸ್ತೆಯಲ್ಲಿ ನಿಂತು ತ **ಲೆಬೋ **ಳಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಸೆಪ್ಟೆಂಬರ್ 4 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಾಯಕಿಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
# actress # Shwetha laxman #

29/08/2026

ಪಿಎಫ್‌ ಹಣವೂ ಬಂದಿಲ್ಲ, ನಮ್ಮ ಮನೆಯವರಿಗೆ ನ್ಯಾಯವೂ ಸಿಕ್ಕಿಲ್ಲ!

ಪಿಎಫ್‌ ಹಣವೂ ಬಂದಿಲ್ಲ, ನಮ್ಮ ಮನೆಯವರ ಸಾ **ನ ನ್ಯಾಯದ ಬಗ್ಗೆ ಬಿಜೆಪಿಯವರೂ ಮಾತಾಡ್ತಿಲ್ಲ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕ ಪರಿಶೋಧಕರಾಗಿದ್ದ ಚಂದ್ರಶೇಖರ್ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಮೃ** ಚಂದ್ರಶೇಖರ್‌ ಅವರ ಪತ್ನಿ ಕವಿತಾ ಅವರು ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮನೆಯವರ ಸಾ **ಗೆ ನ್ಯಾಯ ಸಿಗಬೇಕು ಎಂದು ಅಂದಿನಿಂದಲೂ ಕೇಳಿಕೊಂಡು ಬರುತ್ತಿದ್ದರೂ, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವರಿಗೆ ಮಾತ್ರ ಶಿಕ್ಷೆಯಾಗುತ್ತಿದೆ, ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಅಧಿಕಾರಿಗಳು ಆರಾಮಾಗಿ ಹೊರಗಡೆ ಓಡಾಡಿಕೊಂಡಿದ್ದಾರೆʼʼ ಎಂದು ಕವಿತಾ ಬೇಸರ ವ್ಯಕ್ತಪಡಿಸಿದ್ದಾರೆ.
# PF # chandrashekar # nagendra # wife

29/08/2026

ಅಕ್ಕಂದಿರ ಜೊತೆ ಹಳದಿ ಶಾಸ್ತ್ರದಲ್ಲಿ ನಟ ಚಿಕ್ಕಣ್ಣ!

ಸ್ಯಾಂಡಲ್‌ವುಡ್‌ನ ಹಾಸ್ಯನಟ ಚಿಕ್ಕಣ್ಣ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮೆಹಂದಿ ಶಾಸ್ತ್ರ ಹಾಗೂ ಹಳದಿ ಶಾಸ್ತ್ರ ಮುಗಿದಿದ್ದು, ಇಂದು (ಆ.29) ಆರತಕ್ಷತೆ ನಡೆಯಲಿದೆ. ನಾಳೆ (ಆ.30) ಧಾರಾ ಮುಹೂರ್ತ ಇರಲಿದೆ. ಸದ್ಯ ಚಿಕ್ಕಣ್ಣ ಹಾಗೂ ಅವರ ಭಾವಿ ಪತ್ನಿ ಪಾವನಾ ಅವರ ಅರಿಶಿಣ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.
# sandalwood # actor # chikanna # mehandi

Address


Rajshahi Division